ಹುಟ್ಟಿನಿಂದ ಬಂದದ್ದಲ್ಲ ವರ್ಣ - Caste is not by BIRTH but by WORK

WhatsApp
ಹುಟ್ಟಿನಿಂದ ಬಂದದ್ದಲ್ಲ ವರ್ಣ - Caste is not by BIRTH but by WORK

Caste is not By Birth but by Work
(ವಜ್ರಸೂಚಿಕೋಪನಿಷತ್ತಿನ ಪ್ರಕಾರ...)

೧. ಋಷ್ಯಶೃಂಗ.... ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.

೨. ಕೌಶಿಕ ..... ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.

೩. ಜಂಬೂಕ ಮಹರ್ಷಿ ನರಿಗಳನ್ನು ಹಿಡಿಯುವ ಜಾತಿಯವರು.

೪. ವಾಲ್ಮೀಕಿ ಕಿರಾತಕರ ಒಂದು ಜಾತಿಗೆ ಸೇರಿದವನು. ಈತ ರಚಿಸಿದ ರಾಮಾಯಣ ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ. ಈತನನ್ನು ಆದಿಕವಿಯೆಂದು ಗೌರವಿಸಲಾಗುತ್ತಿದೆ. 

೫. ವ್ಯಾಸ ಮೀನುಗಳನ್ನು ಹಿಡಿಯುವ ಬೆಸ್ತರ ಜಾತಿಗೆ ಸೇರಿದವನು. ಹಿಂದುಗಳಿಗೆ ಪರಮಪವಿತ್ರವಾದ ವೇದಗಳು. ಈತನ ಮೂಲಕ ವಿಭಜಿಸಲ್ಪಟ್ಟವು. ಆದ್ದರಿಂದ ಈತನನ್ನು ವೇದವ್ಯಾಸ ಎಂದು ಪೂಜಿಸುತ್ತಾರೆ. 

೬. ಗೌತಮ ಮೊಲ ಹಿಡಿಯುವ ಜಾತಿಗೆ ಸೇರಿದವನು. 

೭. ವಶಿಷ್ಟ ಒಬ್ಬ ವೇಶ್ಯೆಗೆ ಜನಿಸಿದವನು. ಈತನ ಹೆಂಡತಿ ನಿಮ್ನಜಾತಿಗೆ ಸೇರಿದ ಮಹಿಳೆಯಾದ ಆರುಂಧತೀ ದೇವಿ. ಈ ದಿನಗಳಲ್ಲೂ ಸಹ ನವ ದಂಪತಿಗಳು ಆರಂಧತೀ ಮತ್ತು ವಶಿಷ್ಟರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಪ್ರತಿ ಪೂಜೆಯಲ್ಲೂ ಹಿಂದುಗಳಿಂದ ಆರಂಧತೀವಶಿಷ್ಠಾಭ್ಯಾಂ ನಮಃ  ಎಂದು ಪೂಜೆಗಳನ್ನು ಸ್ವೀಕರಿಸುತ್ತಿದ್ದಾರೆ. ಇವರ ಮಗ ಶಕ್ತಿ. ಇವನ ಹೆಂಡತಿ ಸಹ ನಿಮ್ನ ಜಾತಿಗೆ ಸೇರಿದಾಕೆ ಚಂಡಾಲಾಂಗಿನಿ. ಇವರ ಮಗ ಪರಾಶರ ಮಹರ್ಷಿ. ಈತ ಬೆಸ್ತ ಮಹಿಳೆ ಮತ್ಸ್ಯಗಂಧಿಯನ್ನು ಸೇರಿ ವ್ಯಾಸನ ಜನನಕ್ಕೆ ಕಾರಣರಾದರು.  

೮. ಅಗಸ್ತ್ಯ ಮಣ್ಣಿನ ಪಾತ್ರೆಯಲ್ಲಿ ಹುಟ್ಟಿದವನು. 

9. ಮತಂಗ ಮಹರ್ಷಿ ನಿಮ್ನಕುಲದಲ್ಲಿ ಜನಿಸಿದರೂ ಬ್ರಾಹ್ಮಣನಾದ! ಈತನ ಮಗಳೇ ಮಾತಂಗಕನ್ಯೆ ಒಂದು ಶಕ್ತಿ ದೇವತೆ. ಕಾಳಿದಾಸನನ್ನು ಮೊದಲ್ಗೊಂಡು ಎಷ್ಟೋ ಜನ ಮಹನೀಯರು ಈ ಮಾತೆಯ ಉಪಾಸನೆಯನ್ನು ಮಾಡಿದ್ದಾರೆ… ಮಾಡುತ್ತಿದ್ದಾರೆ. ಆಕೆಯೇ ಶ್ಯಾಮಲಾದೇವಿ. 

ಇನ್ನೂ

೧. ಐತರೇಯ ಮಹರ್ಷಿ ಒಬ್ಬ ದಸ್ಯ ಮತ್ತು ಕಿರಾತಕ ದಂಪತಿಗಳಿಗೆ ಜನಿಸಿದವನು ಅಂದರೆ ಇಂದಿನ ಲೆಕ್ಕಾಚಾರದಂತೆ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿದವರು ಜನ್ಮತಃ ಬ್ರಾಹ್ಮಣನಲ್ಲ ಆದರೆ ಆತ ಅತ್ಯುನ್ನತವಾದ ಬ್ರಾಹ್ಮಣನಾದ. ಆತನ ಕೃತಿಗಳೇ ಐತರೇಯ ಬ್ರಾಹ್ಮಣ ಮತ್ತು ಐತರೇಯೋಪನಿಷತ್ತು. ಐತರೇಯ ಬ್ರಾಹ್ಮಣವು ಬಹಳ ಕ್ಲಿಷ್ಟವಾದುದು. ಋಗ್ವೇದವನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯಕ. 

೨. ಐಲುಷ ಮಹರ್ಷಿ ಒಬ್ಬ ದಾಸಿ ಪುತ್ರ. ಆತ ಋಗ್ವೇದದ ಮೇಲೆ ದೀರ್ಘವಾದ ಅಧ್ಯಯನವನ್ನು ಮಾಡಿ ಬಹಳಷ್ಟು ವಿಷಯವನ್ನು ಅರಿತ. ಆತನನ್ನು ಋಷಿಗಳೆಲ್ಲರೂ ಅಹ್ವಾನಿಸಿ ತಮ್ಮ ಆಚಾರ್ಯನನ್ನಾಗಿ ಮಾಡಿಕೊಂಡರು (ಐತರೇಯ ಬ್ರಾ. ೨.೧೯)

೩. ಸತ್ಯಕಾಮ ಜಾಬಾಲ ಮಹರ್ಷಿ ಸಹ ಒಬ್ಬ ವೇಶ್ಯೆಯ ಮಗ. ತಂದೆಯ ಗೋತ್ರವಲ್ಲ ಕಡೇ ಪಕ್ಷ ತನ್ನ ತಂದೆ ಹೆಸರೇನು ಎಂದೂ ಸಹ ತಿಳಿಯದವನು.  ಆದರೆ  ಜ್ಞಾನದಿಂದಾಗಿ ಬ್ರಾಹ್ಮಣನಾದ.

ಉನ್ನತವಾದ ವಂಶಗಳಲ್ಲಿ ಹುಟ್ಟಿಯೂ ಸಹ ವರ್ಣಾಶ್ರಮ ಧರ್ಮಗಳನ್ನು ಅನುಸರಿಸದೇ ಇದ್ದವರು  ನಿಸ್ಸಂದೇಹವಾಗಿ ಬಹಿಷ್ಕರಿಸಲ್ಪಟ್ಟರು ಅವರಲ್ಲಿ ಕೆಲವರು 

೧. ಭೂದೇವಿಯ ಮಗ ಕ್ಷತ್ರಿಯನಾದ ನರಕ ರಾಕ್ಷಸನಾದ!

೨. ಬ್ರಹ್ಮನ ವಂಶಸ್ಥರಾದ ಹಿರಣ್ಯಾಕ್ಷ, ಹಿರಣ್ಯಕಶಪು ಮತ್ತು ರಾವಣರು ಬ್ರಾಹ್ಮಣಾದರೂ ರಾಕ್ಷಸರಾದರು

೩. ರಘುವಂಶದ ಮೂಲಪುರುಷನಾದ ರಘುಮಹಾರಾಜನ ಮಕ್ಕಳಲ್ಲಿ ಒಬ್ಬನಾಗಿದ್ದ ಪ್ರವಿದ್ಧನು ರಾಕ್ಷಸನಾದ. 

೪. ತ್ರಿಶಂಕು ಮಹಾರಾಜ ಕ್ಷತ್ರಿಯ ಆದರೆ ಚಂಡಾಲನಾದ!

೫. ವಿಶ್ವಾಮಿತ್ರನು ಕ್ಷತ್ರಿಯ ಬ್ರಾಹ್ಮಣನಾದ ಈತನ ವಂಶಸ್ಥರೇ ವಿಶ್ವಾಮಿತ್ರ ಗೋತ್ರದ ಬ್ರಾಹ್ಮಣರಾದರು. ವಿಶ್ವಾಮಿತ್ರನ ಮಕ್ಕಳಲ್ಲಿ ಕೆಲವರು ಅನ್ಯರಾದರು. 

೬. ನವ ಬ್ರಹ್ಮರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಯ ಮಗ ಪೃಷಧ ಬ್ರಹ್ಮಜ್ಞಾನವಿಲ್ಲದ ಕಾರಣ ಅನ್ಯನಾಗಿ ಬದಲಾದ (ವಿಷ್ಣುಪುರಾಣ ೪.೧.೧೪)

೭. ನೇದಿಷ್ಟ ಮಹಾರಾಜನ ಮಗ ನಾಭ. ಇವನಿಗೆ ಕ್ಷಾತ್ರ ಜ್ಞಾನವಿಲ್ಲದ ಕಾರಣ, ವರ್ತಕ ಜ್ಞಾನವಿದ್ದ ಕಾರಣ ವೈಶ್ಯನಾಗಿ ಮಾರ್ಪಟ್ಟ (ವಿಷ್ಣುಪುರಾಣ ೪.೧.೧೩). 

೮. ಕ್ಷತ್ರಿಯರಾದ ರಥೋದರ, ಅಗ್ನಿವೇಶ, ಹರಿತ ಬ್ರಹ್ಮಜ್ಞಾನದ ಕಾರಣದಿಂದಾಗಿ ಬ್ರಾಹ್ಮಣರಾದರು. ಹರಿತನ ವಂಶಿಕರು ಅವನ ಹೆಸರನ್ನೇ ಹೊಂದಿ ಹರಿತಸ ಗೋತ್ರದ ಬ್ರಾಹ್ಮಣರೆನಿಸಿದ್ದಾರೆ (ವಿಷ್ಣುಪುರಾಣ ೪.೩.೫)

೯. ಶೌನಕ ಮಹರ್ಷಿಯ ಮಕ್ಕಳು ನಾಲ್ಕು ವರ್ಣಗಳಿಗೆ ಸೇರಿದವರಾಗಿ ಬದಲಾದರು (ವಿಷ್ಣುಪುರಾಣ ೪.೮.೧)

೧೦. ಅದೇ ವಿಧವಾಗಿ ಗೃತ್ಸಮದ, ವೀತವ್ಯ, ವೃತ್ಸಮತಿ ಇವರ ಮಕ್ಕಳೂ ಸಹ ನಾಲ್ಕು ವರ್ಣಗಳಿಗೆ ಸೇರಿದವರಾದರು. 


ಇವರಲ್ಲಿ ಬಹಳಷ್ಟು ಜನ ವೇದಮಂತ್ರಗಳನ್ನು ಸಹ ರಚಿಸಿದವರಾಗಿದ್ದಾರೆ!

ಹಿಂದೂ ಧರ್ಮವು ಜ್ಞಾನವನ್ನು ಅವಲಂಬಿಸಿದೆಯೇ ಹೊರತು, ಜನನವನ್ನು ಅವಲಂಬಿಸಿಲ್ಲ.  

ಆದ್ದರಿಂದಲೇ "ಋಷಿಮೂಲ, ನದೀಮೂಲ, ಸ್ತ್ರೀಮೂಲ  ನೋಡಬೇಡಿ" ಅಂದಿದ್ದು.

ಹುಟ್ಟಿನಿಂದ ಬಂದದ್ದಲ್ಲ ಈ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ  ವರ್ಣಗಳು,,,, 

ಒಳ್ಳೆಯ ಮನಸ್ಸುಳ್ಳ ಪ್ರತಿ ವ್ಯಕ್ತಿಯೂ ಸಹ ಜ್ಞಾನಕ್ಕೆ ಅರ್ಹನೇ ಆಗುತ್ತಾನೆ!

ಆದ್ದರಿಂದಲೇ...


"ಹೀನಂ ದೂಷಯತಿ ಇತಿ ಹಿಂದೂ" ಎಂದಾಗಿದೆ. ಅದರ ಅರ್ಥ: ಹೀನ(ನೀಚ/ತುಚ್ಛ)ವಾದದ್ದನ್ನು ದೂರವಿರಿಸುವುದು ಎಂಬುದಾಗಿ. ಇದುವೇ "ಹಿಂದೂ" ಪದದ ವ್ಯುತ್ಪತ್ತಿ(=ಜನನ). 

ನಾವು ಹಂಚಿಕೊಳ್ಳುವ ವಿವಿಧ ಸಂದೇಶಗಳೊಂದಿಗೆ ಈ ಸಂದೇಶವನ್ನೂ ಸಹ ನಮ್ಮ ಬಂಧುಮಿತ್ರರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳೋಣ.?

ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ಕುರಿತಾಗಿ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು  ದೂರ ಮಾಡೋಣ.

ಶ್ರೀಕೃಷ್ಣಾರ್ಪಣಮಸ್ತು

Leave a reply