ಈ ಎರಡಕ್ಷರದ ಹಿಂದೆ ಬೀಳಬೇಡಿ

Webee Cafe
ಈ ಎರಡಕ್ಷರದ ಹಿಂದೆ ಬೀಳಬೇಡಿ

'ವಿಸ್ಕಿ 'ಗೂ ಎರಡಕ್ಷರ
'ಬ್ರಾಂಡಿ ' ಗೂ ಎರಡಕ್ಷರ
'ರಮ್ ' ಗೂ ಎರಡಕ್ಷರ
'ಜಿನ್ ' ಗೂ ಎರಡಕ್ಷರ

'ವಿಸ್ಕಿ 'ಗೂ  ಎರಡಕ್ಷರ

'ಬ್ರಾಂಡಿ ' ಗೂ  ಎರಡಕ್ಷರ

'ರಮ್ ' ಗೂ ಎರಡಕ್ಷರ

'ಜಿನ್ ' ಗೂ ಎರಡಕ್ಷರ

'ವೋಡ್ಕಾ ' ಗೂ ಎರಡಕ್ಷರ

'ವೈನ್ ' ಗೂ ಎರಡಕ್ಷರ

'ಬೀರ್ ' ಗೂ ಎರಡಕ್ಷರ

'ಸ್ಕಾಚ್ ' ಗೂ ಎರಡಕ್ಷರ

ಸುರಿಯುವ 'ಗ್ಲಾಸ್ ' ಗೂ ಎರಡಕ್ಷರ

ಬೆರೆಸುವ 'ನೀರು ' ಗೂ ಎರಡಕ್ಷರ

ಬೆರೆಸುವ 'ಸೋಡಾ 'ಗೂ ಎರಡಕ್ಷರ

ಮಾರಾಟ ಮಾಡುವ 'ಬಾರ್ ' ಗೂ ಎರಡಕ್ಷರ.

ಅಳತೆ ಮಾಡುವ 'ಪೆಗ್ 'ಗೂ ಎರಡಕ್ಷರ.

ಕುಡಿದ ಮೇಲೆ ಬರುವ 'ಮತ್ ' ಗೂ ಎರಡಕ್ಷರ.

ಕುಡಿದು ಮಾಡುವ 'ವಾಂತಿ 'ಗೂ ಎರಡಕ್ಷರ.

ಮತ್ತೇರಿ ಬೀಳುವ 'ಗುಂಡಿ 'ಗೂ ಎರಡಕ್ಷರ.

ಹೊತ್ತೋಯುವ 'ಜನ 'ರಿಗೂ ಎರಡಕ್ಷರ.

ಹೋಗುವ 'ಮಾನ 'ಕ್ಕೂ ಎರಡಕ್ಷರ.

ಕಣ್ಣೀರು ಹಾಕುವ 'ಪತ್ನಿ 'ಗೂ ಎರಡಕ್ಷರ.

ಬರುವ 'ರೋಗ ' ವೂ ಎರಡಕ್ಷರ.

ಇದಕೆಲ್ಲ ಮಾಡಲು 'ಖರ್ಚು ' ಎರಡಕ್ಷರ.

ಇದಕ್ಕೆಲ್ಲ ಮಾಡಿದ' ಸಾಲ ' ವೂ ಎರಡಕ್ಷರ.

ಸಾಲ ತೀರಿಸಲು ಮಾರುವದು' ಆಸ್ತಿ

ಗೂ ಎರಡಕ್ಷರ.

ಕೊನೆಗೆ ಬರುವದೇ 'ಸಾವು ' ಎರಡಕ್ಷರ.

ಹೊತ್ತೋಯ್ಯಲು 'ಚಟ್ಟ ' ಎರಡಕ್ಷರ.

ದೇಹ ದಫನ್ ಮಾಡಲು' ಮಣ್ಣು '

or 'ಅಗ್ನಿ ' ಎರಡಕ್ಷರ.

ನದಿಗೆ ಬಿಡುವ 'ಅಸ್ಥಿ ' ಎರಡಕ್ಷರ.

ಕೊನೆಗೆ ಮಾಡುವರು 'ತಿಥಿ ' ಎರಡಕ್ಷರ.

ಗೋಡೆಗೆ ಹಾಕುವರು 'ಫೋಟೋ 'ಎರಡಕ್ಷರ.

ಕೊನೆಗೆ ಹಿಂದೆ ಬರವದು 'ಪಾಪ '

ಎರಡಕ್ಷರ.

ಈ ಎರಡಕ್ಷರದ ಹಿಂದೆ ಬೀಳಬೇಡಿ 

Leave a reply