ನಂಬಿಕೆ ಎಂಬುದು ಸಂಬಂಧದ ಅಡಿಪಾಯ

Suraksha Shetty
ನಂಬಿಕೆ ಎಂಬುದು ಸಂಬಂಧದ ಅಡಿಪಾಯ

ನಂಬಿಕೆ ಎಂಬುದು ಮೂರಕ್ಷರದ ಪದ. ಹೆಸರೇ ಸೂಚಿಸುವಂತೆ ನಂಬಿಕೆ ಎಂಬುದು ಸಂಬಂಧದ ಅಡಿಪಾಯ. ಅಡಿಪಾಯವು ಗಟ್ಟಿ ಇಲ್ಲದಿದ್ದರೆ ಯಾವ ಸಂಬಂಧಗಳು ಉಳಿಯಲಾರದು ಹೀಗೆ ನಂಬಿ ಕೆಟ್ಟವರಿಲ್ಲವೋ....... ರಂಗಯ್ಯನಾ ಎಂದ, ದಾಸವಾಣಿಯೇ ಇದೆ ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನಂಬಬೇಕು ಎಂದೇನು ಅಲ್ಲ ಪ್ರತಿಯೊಂದಕ್ಕೂ ಅದರದ್ದೇ ಆದ ಮಿತಿಯಿರಬೇಕು.

ಮಹಾಭಾರತದಲ್ಲಿ ಅರ್ಜುನ ಕೌರವ ಸಮೂಹವನ್ನು ಎದುರಿಸಿದ್ದು ತೋಳ್ ಬಲದಿಂದ ಅಲ್ಲ, ಕೃಷ್ಣ ತನ್ನ ಜೊತೆಗಿದ್ದಾನೆ ಎಂಬ ನಂಬಿಕೆಯಿಂದ, ಆದೇ ರೀತಿ ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದು ತನ್ನ ಸಾಮರ್ಥ್ಯದ ಮೇಲಿನ ನಂಬಿಕೆಯಿಂದ. ಹೀಗೆ ಸ್ನೇಹ ಸಂಬಂಧಗಳು ಸುಸ್ಥಿತಿಯಲ್ಲಿರಲು ಪರಸ್ಪರ ನಂಬಿಕೆ ಇರಬೇಕು. ನಂಬಿಕೆ ಪರ್ವತವನ್ನೇ ಕದಲಿಸಬಲ್ಲದು ಎಂಬ ಮಾತಿದೆ. ಆದರೆ ಈ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ನಂಬಿಕೆ ಎಂಬುದು ಪರ್ವತವನ್ನು ಕದಲಿಸದಿದ್ದರೂ ಬದುಕನ್ನು ಬದಲಾಯಿಸುತ್ತದೆ. ಹೀಗೆ ಬದುಕು ಬಡಲಾಗಬೇಕಾದರೆ ನಮ್ಮ ಚಿಂತನೆಗಳು, ಭಾವನೆಗಳು ಬದಲಾಗಬೇಕು. ಚಿಂತನೆ, ಭಾವನೆಗಳು ಬದಲಾಗಬೇಕಾದರೆ ನಮ್ಮ ನಂಬಿಕೆಗಳು ಬದಲಾಗಬೇಕು. ನಂಬಿಕೆ ಬದಲಾದರೆ ಮಾತ್ರ ಬದುಕು ಬದಲಾಗುತ್ತದೆ. ಹೀಗೆ ನಂಬಿಕೆಗಳು ನಮ್ಮನ್ನು ಕಾಯುತ್ತವೆ ಹಾಗೂ ಬೆಳೆಸುತ್ತವೆ.

Leave a reply