
ಮಗನು 2 ವರ್ಷ ಕಳೆದು ಅಮೇರಿಕಾದಿಂದ ಅಮ್ಮನನ್ನು ಕಾಣಲು ಭಾರತಕ್ಕೆ ಬಂದನು. ಬಂದು ಅಮ್ಮನನ್ನು ಕಾಣಲು ಈ ತಮ್ಮ ಪ್ಲಾಟ್ ಗೆ ಬಂದು ಬಾಗಿಲು ತಟ್ಟಿದನು. ಆದರೆ ಅಮ್ಮ ಒಳಗಿನಿಂದ ಯಾವುದೇ ರೀತಿಯ ಸ್ಪಂದನೆ ಕೊಡಲಿಲ್ಲ. ಕೊನೆಗೆ ಸಂಶಯ ಬಂದು ಬಾಗಿಲು ಒಡೆದು ನೋಡಿದನು. ನೋಡಿದ ಮರುಕ್ಷಣವೇ ತನ್ನ ಜಂಘಾ ಉಡುಗಿ ಹೋದಂತೆ ಆದನು. ಆದರೆ ಅಲ್ಲಿ ಅವನು ಕಂಡದ್ದು ಅಮ್ಮನನ್ನು ಅಲ್ಲ ಬದಲಾಗಿ ಸೋಫಾದ ಮೇಲೆ ಕುಳಿತ ಭಂಗಿಯಲ್ಲಿರುವ ಅಮ್ಮನ ಎಲುಬುಗಳ ಅಸ್ಥಿಪಂಜರವನ್ನು ಮಾತ್ರ. ಯಾವಾಗ ಅಸುನೀಗಿದ್ದು ಎಂದು ತಿಳಿಯಲು ಮೆಡಿಕಲ್ ಟೆಸ್ಟ್ ನಡೆಸುವಾಗ ಅಸುನೀಗಿ ಒಂದುಕಾಲು ವರ್ಷಗಳೇ ಕಳೆದಿದೆ. ಅದಕ್ಕಿಂತ ಮೊದಲು ಅಸುನೀಗಲು ಸಾಧ್ಯವಿಲ್ಲ. ಯಾಕೆಂದರೆ ಒಂದುಕಾಲು ವರ್ಷಗಳ ಮೊದಲು ಅವನು ಅಮ್ಮನ ಜೊತೆ ಫೋನ್ನಲ್ಲಿ ಮಾತನಾಡಿದ್ದಾನೆ. ಅದಕ್ಕೆ ಸಾಕ್ಷಿ ಕೂಡ ಅವನ ಜೊತೆ ಇದೆ. ವಾರದಲ್ಲಿ ಒಂದು ದಿನವಾದರೂ ಅಮ್ಮನ ಜೊತೆ ಮಾತನಾಡಲು ಸಮಯ ಇರಲಿಲ್ಲ. ಆ ರೀತಿ ಅವನು ಬದಲಾಗಿದ್ದ.
ಧಣಿಕಳಾದ ಆ ಸ್ತ್ರೀ ಮರಣದ ಕೊನೆಯ ಘಳಿಗೆಯಲ್ಲಿ ಏನನ್ನು ಆಲೋಚಿಸಿರಬಹುದು.?ಸಂಸ್ಕಾರ ಕಲಿಯದ ಸಂಪತ್ತು ಎಲ್ಲದಕ್ಕೂ ಪರಿಹಾರವೇ. ಚಿಂತಾನಾ ಶೀಲವಾದ ಈ ಜಗತ್ತಿನಲ್ಲಿ ಜೀವನದ ಕೊನೆಯ ಘಳಿಗೆಯಲ್ಲಿ ಒಂದು ಲೋಟ ನೀರಿಗೆ ಬದಲಾಗಿ ಏನನ್ನು ಕೊಡಬಹುದು ಎಂದು ಯಾಕೆ ಕಂಡುಹಿಡಿಯಲಾಗಿಲ್ಲ?. ಮಕ್ಕಳ ಮೇಲಿರುವ ಅತಿಯಾದ ಪ್ರೀತಿ, ಹಾಗೂ ಪರಂಪರೆಯನ್ನು ಕಲಿಯದ ವಿದ್ಯಾಭ್ಯಾಸವನ್ನು ಕೊಟ್ಟು ಅವರನ್ನು ಬೆಳೆಸಿ ಕೊನೆಘಳಿಗೆಯಲ್ಲಿ ಅವರಿಂದ ಒಂದು ಲೋಟ ನೀರಿಗಾಗಿ ಹಾತೊರೆದು ಕಣ್ಣೀರಿಟ್ಟು ಹೋದ ಜೀವ,
ಹೆತ್ತು ಹೊತ್ತ ಜೀವಗಳನ್ನೇ ಮರೆತು ಬಿಟ್ಟು ಕೊನೆಘಳಿಗೆಯಲ್ಲಿ ಅವರನ್ನು ನೋಡಲು ಕೂಡ ಸಮಯ ಸಿಗದೇ ಇರುವಷ್ಟು ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು.
"ಕಣ್ಣೀರು ಮಾತ್ರ"