ಗಣೇಶೋತ್ಸವವನ್ನು ಆದರ್ಶವಾಗಿ ಆಚರಿಸಿ!

Webee Cafe
ಗಣೇಶೋತ್ಸವವನ್ನು ಆದರ್ಶವಾಗಿ ಆಚರಿಸಿ!

೧. ಶ್ರೀ ಗಣೇಶಚತುರ್ಥಿಗೆ ಪೂಜಿಸಬೇಕಾದ ಮೂರ್ತಿ ಹೇಗಿರಬೇಕು?.

????ಆಧ್ಯಾತ್ಮಶಾಸ್ತ್ರಕ್ಕನುಸಾರವಾಗಿ ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ತಯಾರಿಸಿರಬೇಕು.ಗೋಮಯ ಗಣೇಶ ಒಳ್ಳೆಯದು. ಇತರ ವಸ್ತುಗಳಾದ , ಉದಾ-ಪ್ಲಾಸ್ಟರ್ ಆಫ್ ಪ್ಯಾರಿಸ್ , ಕಾಗದದ ಮುದ್ದೆ , ಫೈಬರ್ , ಮುಂತಾದವುಗಳಿಂದ ತಯಾರಿಸಿರುವ ಮೂರ್ತಿಯನ್ನು ತರಬಾರದು.

🕉ಮೂರ್ತಿಯು ಮಣೆಯ ಮೇಲೆ ಕುಳಿತಿರುವ , ಆದಷ್ಟು ಎಡ ಸೊಂಡಿಲಿರುವ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಿದಿರುವಂತಹದ್ದಾಗಿರಬೇಕು.


೨. ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಸ್ತುಗಳ ಮಹತ್ವ!


🕉ದೂರ್ವೆ ಮತ್ತು ಕೆಂಪು ಹೂವುಗಳನ್ನು ಅರ್ಪಿಸಬೇಕು: ಗಣೇಶನ ವರ್ಣ ಕೆಂಪು. ಗಣೇಶನ ಪೂಜೆಯಲ್ಲಿ ಕೆಂಪು ಬಟ್ಟೆ, ಕೆಂಪು ಹೂವು , ರಕ್ತಚಂದನವನ್ನು ಉಪಯೋಗಿಸುತ್ತಾರೆ. ಅವುಗಳ ಕೆಂಪು ಬಣ್ಣದಿಂದ ಮೂರ್ತಿಯ ಕಡೆಗೆ ವಾಯುಮಂಡಲದಲ್ಲಿನ ಗಣೇಶ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತದೆ.


🕉ದೂರ್ವೆ(ಗರಿಕೆ) ಅರ್ಪಿಸುವ ಪದ್ದತಿ: ದೂರ್ವೆಗಳನ್ನು ವಿಷಮ ಸಂಖ್ಯೆಯಲ್ಲಿ (೫,೭,೨೧ ಇತ್ಯಾದಿ) ಅರ್ಪಿಸಬೇಕು. ಎಳೆಯ ದೂರ್ವೆಯ ಗೊಂಚಲುಗಳನ್ನು ನೀರಿನಲ್ಲಿ ಮುಳುಗಿಸಿ ಅರ್ಪಿಸುವಾಗ ಶ್ರೀ ಗಣೇಶನ ಮುಖವನ್ನು ಬಿಟ್ಟು ಸಂಪೂರ್ಣ ಮೂರ್ತಿಯನ್ನು ದೂರ್ವೆಗಳಿಂದ ಮುಚ್ಚಬೇಕು.


🕉ಬನ್ನಿ ಮತ್ತು ಮಂದಾರದ ಎಲೆಗಳನ್ನು ಅರ್ಪಿಸಬೇಕು:- ಬನ್ನಿಯ ಮರದಲ್ಲಿ ಅಗ್ನಿಯ ವಾಸವಿರುತ್ತದೆ. ಪಾಂಡವರು ತಮ್ಮ ಶಸ್ತ್ರಗಳು ತೇಜಸ್ವಿಯಾಗಿರಬೇಕೆಂದು ಅವುಗಳನ್ನು ಬನ್ನಿ ಮರದ ಪೊಟರೆಯಲ್ಲಿಟ್ಟಿದ್ದರು. ಮಂದಾರವು ಔಷಧಿ ವನಸ್ಪತಿಯಾಗಿದೆ.


೩. ಗಣೇಶೋತ್ಸವದಲ್ಲಿ ಶ್ರೀ ಗಣೇಶನ ನಾಮಜಪ ಮಾಡಿರಿ:-

ಗಣೇಶೋತ್ಸವದ ಸಮಯದಲ್ಲಿ , ಅಂದರೆ ಶ್ರೀ ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ೧೦೦೦ ಪಟ್ಟು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಕಾರ್ಯನಿರತವಿರುವ ಗಣೇಶತತ್ವದ ಲಾಭವನ್ನು ಪಡೆದುಕೊಳ್ಳಲು "ಓಂ ಗಂ ಗಣಪತಯೇ ನಮಃ" ಈ ನಾಮಜಪವನ್ನು ಸತತವಾಗಿ ಮಾಡಿರಿ.


೪. ಶ್ರೀ ಗಣೇಶನ ಉಪಾಸನೆಯಲ್ಲಿ ಮಾಡಬೇಕಾದ ಕೃತಿಗಳು:-


🕉ಗಣಪತಿಗೆ ಯಾವ ಬೆರಳಿನಿಂದ ಗಂಧ ಹಚ್ಚಬೇಕು??-- ಅನಾಮಿಕಾ (ಕಿರುಬೆರಳಿನ ಪಕ್ಕದ ಬೆರಳು)


🕉ಯಾವ ಹೂವುಗಳನ್ನು ಅರ್ಪಿಸಬೇಕು??-- ಕೆಂಪು ದಾಸವಾಳ / ಕೆಂಪು ಬಣ್ಣದ ಹೂವು.


🕉ಹೂವುಗಳನ್ನು ಹೇಗೆ ಅರ್ಪಿಸಬೇಕು?? -- ತೊಟ್ಟು ದೇವರ ಕಡೆಗೆ ಮಾಡಿ.


🕉ಯಾವ ಊದುಬತ್ತಿಯಿಂದ ಬೆಳಗಬೇಕು??-- ಚಂದನ/ ಕೇದಗೆ/ ಚಮೇಲಿ.ಗೋಮಯ ದೂಪ ಬತ್ತಿ, ರಾಸಾಯನಿಕ ರಹಿತ ಹಾಗೂ ಆರೋಗ್ಯಕರ.




🕉ಗಣಪತಿಗೆ ಎಷ್ಟು ಪ್ರದಕ್ಷಣೆಗಳನ್ನು ಹಾಕಬೇಕು??-- ಎಂಟು ಮತ್ತು ಎಂಟರ ಗುಣಾಕಾರದಲ್ಲಿ.


೫. ಧರ್ಮಶಾಸ್ತ್ರಕ್ಕನುಸಾರ ಹಾಗೂ ಸಾತ್ವಿಕವಾಗಿ ಗಣೇಶೋತ್ಸವ ಆಚರಿಸಿ:-


🕉ಥರ್ಮಾಕೋಲನ್ನು ಬಳಸಬೇಡಿ: ಶ್ರೀ ಗಣೇಶನ ಮೂರ್ತಿಗಾಗಿ ಮಂಟಪ ತಯಾರಿಸಲು 'ಥರ್ಮಾಕೋಲನ್ನು' ಬಳಸಬೇಡಿರಿ, ಥರ್ಮಾಕೋಲ್ ವಿಘಟನೆಯಾಗುವುದಿಲ್ಲ. ಅದರ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ, ಹಾಗೆಯೇ ಥರ್ಮಾಕೋಲ್ ರಾಸಾಯನಿಕ ಪ್ರಕ್ರಿಯೆಯಿಂದ ನಿರ್ಮಾಣವಾಗಿದ್ದರಿಂದ ಅದು ರಜ-ತಮಯುಕ್ತವಾಗಿದೆ. ಇಂತಹ ರಜ-ತಮಯುಕ್ತ ವಸ್ತುವು ಸಾತ್ವಿಕತೆಯನ್ನು ಗ್ರಹಿಸಲಾರದು, ತದ್ವಿರುದ್ಧ ಅದು ರಜ-ತಮ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ.


🕉ಬಾಳೆದಿಂಡಿನಿಂದ ತಯಾರಿಸಿದ ಮಂಟಪ: ಮಂಟಪಕ್ಕಾಗಿ ಬಾಳೆಯ ದಿಂಡನ್ನು ಉಪಯೋಗಿಸಬೇಕು, ಬಾಳೆಯ ದಿಂಡಿನಿಂದ ತಯಾರಿಸಿದ ಮಂಟಪವು ಹೆಚ್ಚು ಸಾತ್ವಿಕವಾಗಿರುತ್ತದೆ..


೬. ಆದರ್ಶ ಗಣೇಶೋತ್ಸವದ ಮೂಲಕ ಶ್ರೀ ಗಣೇಶನ ಕೃಪೆ ಸಂಪಾದಿಸಿ:- 


🕉 ಉತ್ಸವ ಸ್ಥಳದಲ್ಲಿ ಸ್ತೋತ್ರ,ರಾಷ್ಟ್ರ-ಧರ್ಮ ವಿಷಯಗಳ ಪ್ರವಚನಗಳು,ಭಕ್ತಿಗೀತೆಗಳನ್ನು ಹಾಕಿರಿ.


🕉ಉತ್ಸವದ ಸ್ಥಳದಲ್ಲಿ ಚಿತ್ರಗೀತೆಗಳು , ರೆಕಾರ್ಡ್ ಡ್ಯಾನ್ಸ್ , ಜೂಜಾಟ, ಅಸಭ್ಯ ಕುಣಿತ, ಮದ್ಯಪಾನ, ಗುಟಖಾಗಳ ಜಾಹೀರಾತುಗಳನ್ನು ಹಾಕುವುದು ಇತ್ಯಾದಿಗಳನ್ನು ಮಾಡದಿರಿ.


🕉 ಸಾಲಿನಲ್ಲಿ ನಿಂತ ಭಕ್ತರು ಹರಟೆ ಹೊಡೆಯುವ ಬದಲು ನಾಮಜಪ ಮಾಡುವಂತೆ ಪ್ರೋತ್ಸಾಹಿಸಿರಿ!!


೭. ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆದರ್ಶವಾಗಿರಲಿ:-


🕉ಭಾರತೀಯ ಉಡುಪು ಧರಿಸಿ.


🕉ಪಟಾಕಿಗಳಿಗೆ ಅಧಿಕ ಖರ್ಚು ಮಾಡಬೇಡಿ.


🕉ಮೆರವಣಿಗೆಯನ್ನು ರಸ್ತೆಯ ಒಂದು ಬದಿಯಲ್ಲಿ ಸಾಲಾಗಿ ಕೊಂಡೊಯ್ಯಿರಿ.


🕉ಮೆರವಣಿಗೆಯಲ್ಲಿ ಭಜನೆ ಹಾಡಿರಿ, ಶ್ರೀ ಗಣೇಶನ ನಾಮಜಪ ಮಾಡಿ ಮತ್ತು ಅಥರ್ವಶೀರ್ಷವನ್ನು ಪಠಿಸಿ.


🕉ಮೆರವಣಿಗೆಯಲ್ಲಿ ಗುಲಾಲು ಎರಚುವುದು, ಮದ್ಯಪಾನ, ಅಸಭ್ಯ ನೃತ್ಯ ಅಥವಾ ಮಹಿಳೆಯರಿಗೆ ಚುಡಾಯಿಸುವ ಕೃತ್ಯಗಳಾಗದಂತೆ ನೋಡಿಕೊಳ್ಳಿ.


🕉ಬ್ಯಾಂಡ್ ನಂತಹ ವಾದ್ಯಗಳಿಗಿಂತ ತಾಳ, ಮೃದಂಗ, ತಮ್ಮಟೆಯಂತಹ ವಾದ್ಯ ಬಾರಿಸಿ.


🕉ಮೆರವಣಿಗೆಯನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ರಾತ್ರಿ ೧೦ರೊಳಗೆ ಮುಗಿಸಿ.


೮.ಶ್ರೀ ಗಣೇಶನ ಅವಮಾನ ತಡೆಯುವುದೂ ಗಣೇಶಭಕ್ತಿಯೇ ಆಗಿದೆ:-


🕉 ಶ್ರೀ ಗಣೇಶನ ಚಿತ್ರವುಳ್ಳ ಹೊದಿಕೆಗಳಿರುವ ಉತ್ಪಾದನೆಗಳನ್ನು (ಉದಾ.- ಸಿಹಿತಿಂಡಿ, ಊದುಬತ್ತಿ ಇತ್ಯಾದಿ) ಖರೀದಿ ಮಾಡಬೇಡಿ.


🕉ಗಣೇಶಮೂರ್ತಿಗಳನ್ನು ಚಿತ್ರ ವಿಚಿತ್ರ ರೂಪಗಳಲ್ಲಿ ತಯಾರಿಸಿ ಶ್ರೀ ಗಣೇಶನ ವಿಡಂಬನೆಗಳನ್ನು ಮಾಡುವವರನ್ನು ನಿಯಂತ್ರಿಸಿ .


🕉ಶ್ರೀ ಗಣೇಶನ ವಿಡಂಬನೆ ಮಾಡುವ ಪ್ರಸಾರ ಮಾಧ್ಯಮಗಳನ್ನು ಕಾನೂನುರೀತ್ಯಾ ಬಹಿಷ್ಕರಿಸಿ.


🕉ಆದರ್ಶ ಗಣೇಶೋತ್ಸವ ಆಚರಿಸಲು ಗಣೇಶೋತ್ಸವ ಮಂಡಳಿಗಳಿಗೆ  ಸಹಕರಿಸಿ.


🕉️ ಗಣೇಶೋತ್ಸವ ಸಮಿತಿಗಳು ಶಿಕ್ಷಣ ,ಆರೋಗ್ಯ ,ಸಂಸ್ಕಾರ, ಸ್ವಾವಲಂಬನೆ ಮೊದಲಾದ ಸಮಾಜಮುಖಿ ಕಾರ್ಯಗಳನ್ನು ವರ್ಷಪೂರ್ತಿ ನಡೆಸುವಂತೆ ಆಗಲಿ.


🕉ಧರ್ಮೋ ರಕ್ಷತಿ ರಕ್ಷಿತಃ🕉

Leave a reply