
ಭಾರತದ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಜರುಗಿದ ಎಂದಿಗೂ ಮರೆಯಲಾಗದ ಇತಿಹಾಸ ಎಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.1919ರ ಏಪ್ರಿಲ್ 13ರಂದು ಪಂಜಾಬ್ನ ಅಮೃತಸರದ ಜಲಿಯನ್ ವಾಲಾ ಬಾಗ್ ಪ್ರದೇಶದಲ್ಲಿ ಬ್ರಿಟಿಷರ ಗುಂಡಿನ ದಾಳಿಗೆ ನೂರಾರು ಅಮಾಯಕ ಜನರು ಬಲಿಯಾಗಿದ್ದರು.ಭಾರತೀಯ ಕ್ರಾಂತಿಕಾರಿಗಳು ಮತ್ತು ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಗೌರವ ಸೂಚಿಸುವ ಸಲುವಾಗಿ 1951ರಲ್ಲಿ ಭಾರತ ಸರ್ಕಾರ ಸ್ಮಾರಕ ಸ್ಥಾಪಿಸಿತು.