ಇವರು ಮೂಲತಃ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಾಯಾರು ಎಂಬ ಗ್ರಾಮದವರು. ತಂದೆ ಪಕ್ರು ಮೂಲ್ಯ ತಾಳ್ತಾಜೆ ಮತ್ತು ತಾಯಿ ಶ್ರೀ ಗೌರಿ ತಾಳ್ತಾಜೆ. ಇವರಿಗೆ ಐವರು ಸಹೋದರರು ಮತ್ತು ಇಬ್ಬರು ಸಹೋದರಿಯರು. ಇವರಿಗೆ ಹುಟ್ಟಿನಿಂದಲೇ ಓದುವುದು ಮತ್ತು ಬರವಣಿಗೆಯಲ್ಲಿ ತುಂಬಾ ಆಸಕ್ತಿ. ಅದಕ್ಕಿಂತಲೂ ಹೆಚ್ಚು ತುಳು ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಅಪಾರವಾದ ಅಭಿಮಾನ ಮತ್ತು ಒಲವು ಹೊಂದಿದ್ದರು. ತುಳುನಾಡಿಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮವಾಗಿರಲಿ ಅದು ಎಲ್ಲಿಯೇ ಆಗಿರಲಿ ತಪ್ಪದೇ ಅದರಲ್ಲಿ ಭಾಗವಹಿಸುತ್ತಿದ್ದರು. 2009 ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ, 2016 ರಲ್ಲಿ ಕಾಸರಗೋಡಿನಲ್ಲಿ ನಡೆದ ವಿಶ್ವ ತುಳುವೆರೆ ಆಯನೊ ಮುಂತಾದ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರ ವಿಶೇಷತೆ ಮತ್ತು ಅನುಭವಗಳನ್ನು ಎಲ್ಲರಲ್ಲಿಯೂ ಹಂಚುತ್ತಿದ್ದರು. ಬರಹಗಾರ ಎಂದಮೇಲೆ ಅವನು ಓದುಗಾರನು ಆಗಿರಲೇ ಬೇಕಲ್ಲವೇ. ತುಳು ಪತ್ರಿಕೆ, ತುಳು ಪುಸ್ತಕ ಮತ್ತು ದೈವಾರಾದನೆಗಳಿಗೆ ಸಂಭಂದಪಟ್ಟ ಪುಸ್ತಕಗಳನ್ನು ಓದುವುದು ಎಂದರೆ ಇವರ ಹವ್ಯಾಸದಲ್ಲಿ ಪ್ರಮುಖವಾಗಿದೆ. ಮುಖ್ಯವಾಗಿ ಬರವಣಿಗೆಗಿಂತಲೂ ಅದನ್ನು ಸ್ವಾರಸ್ಯಭರಿತವಾಗಿ ಹೇಳುವುದರಲ್ಲಿ ತುಂಭಾ ನಿಪುಣ. ಎಷ್ಟೇ ಚಿಕ್ಕ ಕಥೆಯಾಗಿದ್ದರು ಅದನ್ನು ಸ್ವಾರಸ್ಯವಾಗಿ ಹಾಸ್ಯವಾಗಿ ಎಲ್ಲರ ಮನಸೆಳೆಯುವಂತೆ ಹೇಳುವುದು ಇವರ ವಿಶೇಷತೆ.
ಇವರು ಆನೇಕ ಕಥೆಗಳನ್ನು ಬರೆದಿದ್ದಾರೆ, ಅದರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖವಾದ ಕೆಲವು ಕಥೆಗಳನ್ನು ನಿಮಗೆ ಪರಿಚಯಿಸುತ್ತೇನೆ.
1. ಮುಗಲ್ ತೆಲಿಂಡ್ - ಎಂಬ ಕಥೆಯು 1994 ರ ತುಳುರಾಜ್ಯ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.